Friday, March 29, 2013

ಗಾಜು


“ಫಳ್”

ಹಾಯಾಗಿ ನಿದ್ದೆಮಾಡುತಿದ್ದ
ಗಾಜಿನ ಮೇಲೆ
ಯಾವೋನೋ ಪುಡಾರಿ ದಾಳಿಯಿಟ್ಟ

ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು
ಈಗ ನೈರೂಪ್ಯದ ರಾಶಿ

ಆಚೆಕಡೆ, ಈಚೆಕಡೇ
ಓಡಾಡುತಿದ್ದ ನಶ್ವರ ದೇಹಿಗಳ
ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ ಆ ಗಾಜು
ಈಗ
ಹೃದಯಕ್ಕೆ ಬದಲಾಗಿ
ದೇಹ ಒಡೆದು
ಸತ್ತುಹೋಯಿತು

Saturday, March 23, 2013

ಅಜ್ಞಾತ ಜೀವನ


ಡೇ ಬುಕ್ಕನ್ನು ಮುಚ್ಚಿದಮೇಲೆ
ಮೃತ್ಯುದೇವತೆ ಕೈಬೆರಳುಗಳನ್ನು ’ಫಟ್ ಫಟ್’ ಎಂದು ಮುರಿದುಕೊಂಡರೇ
ಆ ಶಬ್ದಗಳನ್ನು ಅಮೋಘ ಗೀತೆಗಳಂತೇ ಭ್ರಮಿಸಿ ಮೆರೆಯುವ
ಅಜ್ಞಾತ ಜೀವನದಲ್ಲಿ ಪ್ರವೇಶಮಾಡಿದರೇ....

ನಾಮಫಲಕವಿದ್ದರೂ
ನಾಮಧೇಯಿ ಇಲ್ಲದ ಮನೆಯಂತೇ
ಈ ಮನವು.

ವೃತ್ತಲೇಖಿನಿ ಬಳಿಸಿ
ಸರಿಹದ್ದುಗಳನ್ನು ಯಾರೋ ಗೀಚಿದ್ದಾರೇ
ಅವರವರ ಪಾಲು ದೋಚಲೇನೋಯಂತೇ

ಕಣಗಳಾಗಿ, ನರನಾಡಿಗಳಾಗಿ
ಎಲ್ಲವೂ ಹರಿದು ಮುರಿದು ಹೋಗಿ
ನನ್ನು ನಾನು ತುಂಡರಿಸಿಕೊಂಡ ಮೇಲೆ
’ಅಸ್ತಿತ್ವ’ದ ಕೊನೆ ಸಿಕ್ಕಲೇಯಿಲ್ಲ

ನೋಡಲು ಶಕ್ತವಾದ
ಕಣ್ಣುಗಳಲ್ಲೇನೇ ಭಯ ಕಾಣುವುದು

ಈಗ ನನಗೆ ಯಾವ ಭಯವೂ ಇಲ್ಲ!