Saturday, August 23, 2008

ಕೃಷ್ಣಾ ಮೂರುತಿ



ಕೃಷ್ಣಾ ಮೂರುತಿ ಕಣ್ಣ ಮುಂದೇ ನಿಂತಂತೇ ಇದೇ

ಕಷ್ಟಗಳೆಲ್ಲಾ ಪರಿಹರಿಸೀ ಮನ

ಇಷ್ಟಾರ್ಥಗಳನೆಲ್ಲಾ ಕೋಟ್ಟೂ ರಕ್ಷಿಸುವ ಕೃಷ್ಣಾ


ಘಮಘಮಿಸುವ ಸೊಬಗಿನ ಸುಳಿಗುರುಳು

ಚಿವುರು ತುಳಸಿ ವನಮಾಲೆಯ ಕೊರಳು

ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು

ಸೊಬಗಿನ ನಾಭಿಯ ತಾವಾರೆ ಅರಳು ಕೃಷ್ಣಾ


ಮಸ್ತಕದಲಿ ಮಾಣಿಕ್ಯದ ಕಿರೀಟ

ಕಸ್ತೂರಿ ತಿಲಕದಿಂ ಪೊಳೆವ ಲಲಾಟ

ಹಸ್ತದಿ ಕೊಳಲೂದುವ ಓರ ನೋಟ

ಕೌಸ್ತುಭ ಎಡಬಲದಲ್ಲಿ ಓಲಾಟ ಕೃಷ್ಣಾ


ಉಡುದಾರ ವಡ್ಡ್ಯಾಣ ಸಕಲಾಭರಣ

ಬೆಡಗು ಪೀತಾಂಬರ ಶತರವಿ ಕಿರಣ

ಕಡಗ ಗಗ್ಗರೆ ಪೆಂಡೆಯನಿಟ್ಟ ಚರಣ

ಒಡೆಯ ಪುರಂದರ ವಿಠಲನ ಕರುಣ ಕೃಷ್ಣಾ