Wednesday, July 30, 2008

ಪದ ನೋಡು - ೨


ಈ ವಾರದ ಹರಿದಾಸ ಪದ ಶ್ರೀ ಭಾವಿಸಮೀರ ವಾದಿರಾಜ ತೀರ್ಥರದು.

ಹಣವೇ ನಿನ್ನಯ ಗುಣ ಎಷ್ಟು ಬಣ್ಣಿಸಲಿ, ಎಷ್ಟು
ಬಣ್ಣಿಸಲಿ, ಇನ್ನೆಷ್ಟು ಮೋಹಿಸಲಿ

ಬೆಲೆಯಾಗದಾನೆಲ್ಲ ಬೆಲೆಯ ಮಾಡಿಸುವಿ
ಎಲ್ಲಾ ವಸ್ತುಗಳ ಇದ್ದಲ್ಲಿಗೆ ತರಿಸುವಿ
ಕುಲಗೆಟ್ಟವನ ಸತ್ಕುಲಕೆ ಚರಿಸುವಿ
ಹೊಲೆಯನಾದರು ತಂದು ಒಳಗೆ ಸೇರಿಸುವಿ

ಅಂಗನೆಯರ ಸಂಗವನು ಮಾಡಿಸುವಿ
ಶೃಂಗಾರಭರಣಂಗಳ ನೀ ಕೊಡಿಸುವಿ
ಮಂಗನ್ನಾದರು ಅನಂಗನೆಂದೆನಿಸುವಿ
ಕಂಗಳಿಲ್ಲದವನ್ಗೆ ಮಗಳ ಕೊಡಿಸುವಿ

ಹರಣಕ್ಕೆ ಬಂದಂತ ದುರಿತವ ಹಿಡಿಸುವಿ
ಸರ್ವರೊಳಗೆ ಶ್ರೇಷ್ಟ ನರನೆಂದೆನಿಸುವಿ
ಅರಿಯದ ಶುಂಠನ ಅರಿತವನೆನಿಸುವಿ
ಸಿರಿ ಹಯವದನನ ಸ್ಮರಣೆ ಮರೆಯುಸುವಿ

ನನ್ನ ಭಾವನೆ:

"ದುಡ್ಡೇ ದೊಡ್ಡಪ್ಪ"ನೆನ್ನುವ ಗಾದೆ ಎಲ್ಲರಿಗೂ ಗೊತ್ತಿದ್ದೇ. ನಿಜವಾಗಿ ಪ್ರಪಂಚಕ್ಕೆ ದೊಡ್ಡಪ್ಪ ಭಗವಂತ. ಆದರೇ ಆ ದೊಡ್ಡಪ್ಪ ಬದಲಾಗಿ ದುಡ್ಡಪ್ಪೇ ಮುಖ್ಯ ಈ ಪ್ರಪಂಚಕ್ಕೆ. "ನೆಸ್ತೋಹಂ" ಅಂತ ಅನ್ನುತ್ತ ಕಾವಿ ಉಟ್ಟವರು ಸಹಿತ ಪರದಾಡುವ ಹಾಗೇ ಮಾಡತ್ತೇ ಈ ಕಲಿಕಾಲದ ದುಡ್ಡು. ಅಂತಹ ದುಡ್ಡಿನ ಮಾಯೆಗಳನ್ನ ನಾನಾ ರೀತಿಯಲ್ಲಿ ನಿರೂಪಿಸಿದ್ದಾರೇ ಶ್ರೀ ವಾದಿರಾಜರು. ಈ ಕೀರ್ತನೆಗೆ ಅಷ್ಟೋಂದು ವಿವರಣೆ ಬೇಕಾಗಿಲ್ಲವೆಂದು ನನ್ನ ಭಾವನೆ.

ಆದರೇ ಇಲ್ಲಿ ಗಮನಿಸಬೇಕಾದ ಗಮ್ಮತ್ತು ಎಂದರೇ ಎಲ್ಲಾ ಚರಣಗಳು "ವಿ" ಇಂದ ಮುಕ್ತಗೊಳ್ಳುತ್ತವೇ. "ವಿ" ಎಂದರೇ "ವಿತ್ತ" ವೆಂದೇನೋ ಶ್ರೀ ರಾಜರ ಚಮತ್ಕಾರ !?!

Monday, July 28, 2008

ಅನುವಾದ - ೩


ತೆಲುಗು ಮೂಲ : ಪ್ರಸೂನ ರವೀಂದ್ರನ್

ತೆಲುಗು ಶೀರ್ಷಿಕೆ: ಮರ್ಮಂ (ಮರ್ಮ)

ಕನ್ನಡಾನುವಾದ:

ಬೀಳುವ ಹೂವಿನ
ರಹಸ್ಯ ಕಣ್ಣೀರು


ಕರಗಿಹೋಗುವ ಮೇಘದ
ಕೊನೆಯ ಸೂಕ್ತಿಗಳ ತುಂತುರುಗಳು

ವಲಸೆ ಹೋಗುವ ಕಿರಣದ
ಕತ್ತಲ ಮಾತುಗಳು

ಅರ್ಥವಾಗದೇ ಇರುವವೋ
ಅರ್ಥವೇ ಇಲ್ಲದವೋ
ನಿದ್ರೆಯಲ್ಲಿ ಜಾರುವಮುನ್ನ
ನನ್ನ ಎದೆಯ ಸಪ್ಪಳ...