Saturday, September 6, 2014

ಮಳೆಯ ಹಾಗೆ

(ಕೊಂಡಮುದಿ ಸಾಯಿಕಿರಣ್ ಕುಮಾರ್ ತೆಲುಗು ಕವನ ವರ್ಷಂ ಲಾ ಗೆ ಕನ್ನಡಾನುವಾದ)

ವರ್ಷಗಳು ಕಳೆದರೂ
ಊರುಗಳು ಬದಲಾದರೂ
ಮಣ್ಣಿನಲ್ಲಿ ಬೆರೆಯುವ
ಮೋಡದ ಕಂಪು ಬದಲಾಗಿಲ್ಲ

ಎಷ್ಟೆಷ್ಟು ಅನುಭೂತಿಗಳನ್ನು
ಹೊರಹೊಮ್ಮಿ
ಎದೆಯಾಳದಲ್ಲಿ
ನೆನಪುಗಳನ್ನು ಹೊರತೆಗೆಯುತ್ತದೋ!

ಒಮ್ಮೆ
ಮೋಡದಲ್ಲಿ ಹುಟ್ಟಿ
ಮಣ್ಣಿನಲ್ಲಿ ಹೊರಳಾಡಬೇಕೆನ್ನಿಸುತ್ತಾಯಿದೆ…