Saturday, October 25, 2008

ನೆರಳುಗಳು

ಬೆಳಕಿನ ಮಧ್ಯ ತಲೆ ಬಾಗದ
ನೆರಳನ್ನ ನೋಡುತ್ತಿದ್ದಾನೇ ಸೂರ್ಯ

ನಕ್ಷತ್ರಗಳ ಮಧ್ಯ ಬಚ್ಚಿಟ್ಟುಕೊಳ್ಳುವ
ಕತ್ತಲನ್ನು ಬೆಳಗಿಸಲು ನೋಡುತ್ತಿದ್ದಾನೇ ಚಂದ್ರ

ಒಂದೂ ಬೇಕಾಗದ ಭೂಮಿ
ತನ್ನ ಸುತ್ತ ತಾನೇ ತಿರುಗಿಕೊಳ್ಳುತ್ತಿದೆ

ಕೈನಲ್ಲಿ ರೇಖೆಗಳಿಗೂ, ಹಣೆಯಲ್ಲಿನ ರೇಖೆಗಳಿಗೂ
ಸೋಲುತ್ತಿರುವ ಜೀವನವನ್ನ
ಅರ್ಧ ಬೆಳಕಿಗೆ, ಅರ್ಧ ಕತ್ತಲಿಗೆ ಅರ್ಪಿಸಿ
ಭೂಮಿಯ ಹಾಗೇ ಇದ್ದುಬಿಡುತ್ತಿದ್ದೀನಿ!