Saturday, July 26, 2008

ಅನುವಾದ - ೨


ತೆಲುಗು ಮೂಲ - ಕೆ.ಎಸ್. ಕಿರಣ್ ಕುಮಾರ್

ತೆಲುಗು ಶೀರ್ಷಿಕೆ - ಅನುಭವಾಲು (ಅನುಭವಗಳು)

ಕನ್ನಡಾನುವಾದ:

ಪ್ರಶ್ನಾರ್ಥಕಗಳ ಸುಳಿಯಲ್ಲಿ
ನಾನೂ ಒಂದು ಬಿಂದುನೇ !

ತಿರುವುಗಳಲ್ಲಿ,
ಏರಿಳಿತಗಳಲ್ಲಿ,
ಪ್ರತಿ ಕಲ್ಲೂ ಹೇಳಿದ ರಹಸ್ಯ
ರಾತ್ರಿಯ ಮಳೆಯಲ್ಲಿ
ಒದಗಿಹೋಗೆಂತಲೇ !

ಕತ್ತಲು ಹಾಕಿದ
ಕಗ್ಗಂಟುಗಳನ್ನ ಬಿಡಿಸುತ್ತಾ
ಮರೆತೇ ಹೋದ ಪುರಾವೆಗಳ
ಪರಾಮರ್ಶ ಮಾಡುವ ನಾಳೆಯಗಾಗಿ
ಮುಚ್ಚಿಟ್ಟ ಪುಸ್ತಕವನ್ನ
ಮತ್ತೊಮ್ಮೆ ತೆರೆಯಬೇಕು



Friday, July 25, 2008

ಅನುವಾದ - ೧


ತೆಲುಗು ಭಾಷೆಯಲ್ಲಿ ಇತ್ತೀಚಿನ ಪೀಳಿಗೆ ಅವರು ಬರೆದ ಕೆಲವು ಒಳ್ಳೆಯ ಕವನಗಳನ್ನ ಕನ್ನಡ ಓದುಗರರಿಗಾಗಿ ನನಗೆ ಗೊತ್ತಿರುವ ಕನ್ನಡದಲ್ಲಿ ಅನುವಾದ ಮಾಡುತ್ತಾ ಇದ್ದೀನಿ. ಇವು ಓದುಗರರ ಮೆಚ್ಚಿಗೆ ಪಡದಿಲ್ಲವೆಂದರೇ ಅದು ನನ್ನ ಅನುವಾದ ಲೋಪವೇ ಸರಿ.

ತೆಲುಗು ಮೂಲ: ಮೂಲಾ ಸುಬ್ರಹ್ಮಣ್ಯಂ

ತೆಲುಗು ಶೀರ್ಷಿಕೆ: ಏಟಿ ಒಡ್ಡುನ (ನದಿಯ ದಡದಲ್ಲಿ)

ಕನ್ನಡಾನುವಾದ:

ಕೋಟಿ ಆಲೋಚೆನಗಳೊಂದಿಗೆ
ನದಿಯ ದಡದಲ್ಲಿ

ಎಲ್ಲಿಂದ ಬರುತ್ತದೆ ?
ಎಲ್ಲಿಗೆ ಹೋಗುತ್ತದೆ ?
ಹಿಂದಕ್ಕೆ ಏಕೇ ಪ್ರವಹಿಸೋದಿಲ್ಲ ?

ಬಲಿಯುತ್ತ ಇರುವ ಕತ್ತಲಿನಲ್ಲಿ
ಅನ್ವೇಷಣೆ ಮುಗಿಯದಲೇ
ನಿರ್ಷ್ಕಮಣೆ

ನದಿಯು ಇನ್ನೂ
ಹರಿಯುತ್ತಲೇ ಇದೇ


Thursday, July 24, 2008

ಕಾಲಗರ್ಭದಲ್ಲಿ....


ಚರ್ಮದ ಆಳದಲ್ಲಿ
ಬಚ್ಚಿಟ್ಟು ಕೊಂಡ ಕಾಲ
ನಿಜವನ್ನೋ, ಸುಳ್ಳನ್ನೋ
ಹೊರಿತಾ ಇರುತ್ತದೆ

ಕಲ್ಲುಗಳ ಮೌನವನ್ನ
ನುಂಗುವ ನದಿಯ ಶಬ್ದದಂತೇ
ಮೇಲೆಮೇಲೇ ಹರಿಯುವ ಕಾಲ
ಮರಳು ರಾಶಿಗಳಂತೇ
ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ

ಒಂದೊಂದು ದೇಹದ ಕಣದಲ್ಲಿ
ಒಂದೊಂದು ಕಣ್ಣನ್ನು ತೆರೆದು
ಶಾಪಗ್ರಸ್ತ ದೇವತೆಯ ಕಣ್ಣೀರಿನ ನಗುವನ್ನು
ಬಣ್ಣಬಣ್ಣಗಳಲ್ಲಿ ತೋರಿಸುವ ಕಾಲ
ಗೊತ್ತೇ ಆಗದ ಕೋಣೆ ಇಂದ ಬಗ್ಗಿನೋಡುತ್ತದೆ

ಸತ್ಯ, ಅಸತ್ಯಗಳ ಮಧ್ಯೆ
ನನ್ನನ್ನ ನಾನು ಹುಡಿಕಾಡುತ್ತಿರುವಾಗ
ನಾಲಕ್ಕು ದಿಕ್ಕಿನಿಂದಲೂ
ನನ್ನನ್ನ ಸುತ್ತುಮುತ್ತಿಕೊಳ್ಳುತ್ತದೆ
ಕಾಲಗರ್ಭ......



Wednesday, July 23, 2008

ಮೌನಿ


ಆಕಾರವಿಲ್ಲದ ಮಾತುಗಳಲ್ಲಿ
ಸಾಕಾರವಾಗಿ ಕಾಣುತ್ತವೆ
ಊಹಗಳು
ಆಸೆಗಳು
ಭಯಗಳು

ಬಹುವಿಧ ಬಾಧಾತಪ್ತ
ವಿದಲಿತ ಹೃದಯಗಳ
ನಿರ್ವಾಣ ಪರ್ವಗಳಂತೇ
ಮಾತುಗಳು...ಮಾತುಗಳು...ಮಾತುಗಳು

ನರತಂತ್ರಿಗಳ ಘರ್ಷಣೆಯೇ
ಜೀವನವನ್ನ ನಿಯಂತ್ರಣಮಾಡುತ್ತದೆ
ಎಂದು ತಿಳಿದಿನ ಈ ದಿನದಿಂದ
ಮಾತುಗಳಿಗೆ
ಬೆಲೆ ಕೊಡಲು ಆಗುತ್ತಿಲ್ಲ

Tuesday, July 22, 2008

ಪದ ನೋಡು !

ಸುಧ ಓದಿ ಪದ ನೋಡು ಎನ್ನುವುದು ಮಾಧ್ವರ ಮನೆ ಮಾತು. ನನಗೆ ತೆಳದ ದಾಸರ ಪದಗಳಲ್ಲಿ, ನನಗೆ ತೋಚಿದ ಅರ್ಥಗಳನ್ನ ಇಲ್ಲಿ ಬರೆದಿಡ್ತಾಯಿದ್ದೀನಿ. "ಶುಭಾನ್ ಧ್ಯಾಯಂತಿ ಯೇ ಕಾಮ: ಗುರುದೇವ ಪ್ರಸಾದಿತ: ತದ್ದಿತರಾನ್ ಆತ್ಮ ಪಾಪೋತ್ಠಾನ್" ಎಂದ ಆರ್ಯ ವಚನದಂತೇ ಈ ಲೇಖನಗಳಲ್ಲಿನ ಒಳ್ಳೆಯ ವಿಚಾರಗಳು ನನ್ನ ಗುರುಗಳಾದ ಶ್ರೀ ಪುಷ್ಕರಪ್ರಸಾದ್ ಆಚಾರ್ಯರಿಗೇ ಸೇರುತ್ತದೇ. ಎಲ್ಲಾ ರೀತಿಯ ಲೋಪದೋಷಗಳು ಕೇವಲ ನನ್ನ ಅಜ್ಣಾನದಿಂದಲೇ........

ಪದ - ೧

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ
ತನು ನಿಲ್ಲದಯ್ಯ ದಾತನು ಎಣಿಸಯ್ಯ ಧನ

ಜನ ಬರುವರೋ ಸಜ್ಜನ ಬಾರರಯ್ಯ
ಅನುಸರಿಸಿ ಜೀವನ ಪೊರೆಯಯ್ಯ ಧನ

ಹಣ ಪೂಟ್ಟುವುದೊ ಸುಗುಣ ಪುಟ್ಟದಯ್ಯ
ಗುಣನಿಧಿ ಹರಿ ಗುಣ ಗುಣಿಸಿ ಬಾಳಯ್ಯಾ ಧನ

ಭಾಗ್ಯನಿಧಿ ವಿಠಲನ ಆಜ್ಣ ಇದಯ್ಯ
ಸುಜ್ಣನರ ಸೇವಿಸಿ ಪ್ರಾಜ್ಣನಾಗಯ್ಯಾ ಧನ

ನನ್ನ ಭಾವನ:

ಧನ ಮನುಷ್ಯ ಕೃತ. ಸಾಧನ ಪರಮಾತ್ಮನ ಕೃಪೆ. ಮೊದಲಿನದು ಅಶಾಶ್ವತ. ಎರಡನೆಯದು ಶಾಶ್ವತ. ತನುವು ಒಂದು ಜಡ ಪದಾರ್ಥ. ನಶ್ವರ. ದಾತೃತ್ವ ಗುಣ. ಅದು ಅನಶ್ವರ. ಹೀಗಾಗಿ ದಾಸರಾಯರು ಅಶಾಶ್ವತವಾದ ಮನುಷ್ಯಕೃತ ವ್ಯವಹಾರಗಳನು ಬಿಟ್ಟು ಶಾಶ್ವತವಾದ ಪಾರಮಾರ್ಥಿಕ ಹಾದಿಯ ಹಿಡಿಯುವ ಆಲೋಚನೆಯನ್ನು ಮಾಡು ಎಂದು ಪಲ್ಲವಿಯಲ್ಲಿ ಸೂಚಿಸುತ್ತಾರೇ.

ಕೇವಲ ಹುಟ್ಟು ಸಾವುಗಳ ಮಧ್ಯ ನಿರಂತರ ಪಯಣವನ್ನು ಮಾಡುತ್ತಿರುವುವರು ಜನ. ಇವುಗಳ ಬಿಡುಗಡೆಗಾಗಿ ಹುಡುಕಾಟ ನಡೆಸುವರು ಸಜ್ಜನ. ಈ ಸಜ್ಜನರು ಬಹು ಅಪುರೂಪ. ಅಂತಹ ಅಪುರೂಪದ ಸಜ್ಜನರನ್ನು ಹಿಂಬಾಲಿಸುವುದು ಸಾಧಕ ಅವಶ್ಯ ಕರ್ತವ್ಯ.

ಹೇಗೆ ಶುಕ್ಲಶೋಣಿಯುಕ್ತರಾದ ಸಾಮಾನ್ಯ ಜನರು ಹುಟ್ಟುತ್ತಾರೆಯೋ ಹಾಗೇ ಅವರದೇ ಸೃಷ್ಟಿಯಾದ ಹಣವೂ. ಅದು ಹುಟ್ಟುತ್ತಲೇ ಇರುತ್ತದೇ. ಬಂದ ಹಾಗೆಯೇ ಹೋಗುತ್ತ್ತಾ ಇರುತ್ತದೆ. ಇದು ನಿಲ್ಲುವುದು ಅನುಮಾನವೇ ಸರಿ. ಆದರೇ ಸಂಸ್ಕಾರ ಪ್ರೇರಿತವಾದ ಸುಗುಣ ಆಗಲ್ಲ. ಅದನ್ನು ಖರ್ಚು ಮಾಡಿದಷ್ಟೂ ಇನ್ನೂ ಹೆಚ್ಚುತ್ತದೆ. ಮನುಷ್ಯನ ಹುಟ್ಟುವ ಜೊತೆಯಲೇ ಪೂರ್ವಜನ್ಮ ಸಂಸ್ಕಾರವಶಾತ್ ಬರುವುದೇ ಸುಗುಣ. ಹಾಗಾಗಿ ಅದು ಆಗಿಂದಾಗ್ಗೇ ಹಣದ ಹಾಗೇ ಹುಟ್ಟುವುದಲ್ಲ. ಇಂತಹ ಗುಣವೇ ಶಾಶ್ವತನಾದ ಹರಿಯ ಗುಣಗಳನ್ನ ತಿಳಿಯಬಲ್ಲದು. ಅಷ್ಟೇ ಅಲ್ಲದೇ ಮತ್ತೇ ಮತ್ತೇ ಹರಿಯ ಗುಣಗಳನ್ನ ಗುಣಿಸಿ, ಗುಣಿಸಿ, ಗುಣಿಸಿ...ಅವು ಅನಂತ ಎಂದು ತಿಳಿಯುತ್ತದೆ.

ಇಂತಹ ಸುಗುಣಶೀಲಿಗಳಿಗೆ ವಿಠಲ ಸುಜ್ಣರ ಸೇವಿಸುವಂತೇ ಆಜ್ಣ ಆಗಿದೇ. ಯಾರು ಈ ಸುಜ್ಣರು ?. "ಸು ಸಮೀಚೀನತ್ವಾತ್" ಎನ್ನುವ ವ್ಯುತ್ಪತ್ತಿಯನ್ನನುಸರಿಸಿ ಸಮೀಚೀನ ವಾದ ಜ್ಣಾನವುಳ್ಳವರು. "ಜ್ಣಾನದೊಳಗೆ ವ್ಯಾಸ, ಸುಖಮುನಿಯೇನೋ ನೀನು" ಎಂದು ಪುರಂದರದಾಸರು ಕೇಳಿದಹಾಗೇ ವೇದವ್ಯಾಸ, ಮತ್ತೇ ಅವರ ಸಾಕ್ಷಾತ್ ಶಿಷ್ಯರಾದ ಶ್ರೀಮದಾನಂದತೀರ್ಥರ ಅಭಿಮತವನ್ನು ಅನುಸರಿಸಿ ನಡೆಯುವರೇ ಸುಜ್ಣಾನಿಗಳು. ಅಂತಹ ಅವರ ಸೇವಾದಿಗಳಿಂದಲೇ ಅನುಮಾನರಹಿತವಾದ ಜ್ಣಾನಪ್ರಾಪ್ತಿ. ಯೇತತ್ಜ್ಣಾನ ದಿಂದಲೇ ಮುಕ್ತಿ.

***ಶ್ರೀ ಕೃಷ್ಣಾರ್ಪಣಮಸ್ತು***

Monday, July 21, 2008

ರಹದಾರಿಯ ಮೇಲೆ......


ಹಾದಿ ಹೇಳುವ ಕತೆಗಳು ಕೇಳಲು
ಕಾದು ನಿಂತಿವೆ ಮರಗಳು
ದೂರ ಹೆಚ್ಚಾಯಿತೆಂದು
ತಲೆಗೆ ಒಂದು ಟ್ರಾನ್ಸ್ ಮೀಟರ್
ಬಿಗಿದು ನೋಡುತಿದೆ ಬೆಟ್ಟ
*******
ಚಕ್ರಗಳು
ಮುದ್ದಾಡುತಿದ್ದರೇ
ಸುರುಳಿ ಸುತ್ತುತಿದೆ ರಸ್ತೆ
*******
ಮನಸು ತರ್ಕ ಮಾಡುತ್ತಿದೆ
ಟೇಬಿಲ್ ಹಾಗೆ ಇದ್ದೀನಂತ
ಭೂಮಿ ಮೋಸ ಮಾಡುತ್ತಿಲ್ಲವೇ ?
ಅದು ಪ್ರೀತಿ ಆಗಬಾರದೇ
ಎಂದು ಕೇಳುತ್ತಿತ್ತು ರಸ್ತೇ
*******
ತೆಲುಗು ಮೂಲ:
http://aavakaaya.com/showArticle.aspx?a=li&articleId=384&pageNo=0

ನಿಶ್ಚಿಂತೆ


ಎಡ ಮುಂಗಯ್ಯಿ ಮೇಲೇ
ಕಾಲವು ಅಂಟುಕೊಂಡಿದ್ದ ಗುರುತು
ಅಳಿಸಿಹೋಗಿದೆ

ಗುರ್ತಿಸುವುದು ಬಿಟ್ಟಿದ್ದೆನೆಂದು
ಕಣ್ಣು ತಪ್ಪಿಸಿ ತಿರುಗುತಿದೆ ಕಾಲ

ಬೆಟ್ಟದ ತುದಿಯಲ್ಲಿ
ಸೂರ್ಯ ಗಮನವನ್ನು
ಗಮನಿಸುತ್ತಿರುವ ಕಲ್ಲಿನ ಹಾಗೇ
ಈಗ ಹಾಯಾಗಿ ಇದ್ದೀನಿ!


ತೆಲುಗು ಮೂಲ: http://aavakaaya.com/showArticle.aspx?a=li&articleId=358&pageNo=0

ಕ್ಲುಪ್ತವಾಗಿ.....


ತುಪಾನು ಬರುವ ಮುನ್ನೇ ಅಲ್ಲ
ಬಂದು ಆದಮೇಲೂ
ಪ್ರಶಾಂತತೆ

ಅನುಮಾನ
ನಿಶ್ಚಯಜ್ಣಾನ ವಾಗುವುದೇ
ಪ್ರಶಾಂತತೆ

ಅಪಾರ್ಥಗಳ ಸುರಿಮಳೆ
ಯದಾರ್ಥಗಳ ಮಣ್ಣಿನ ವಾಸನೆ
ಅನುಭವಾದ ಮೇಲೆ
ಮನಸು
ತಿಳಿಯಾದ ಅಕಾಶದ ಹಾಗೇ !!


ತೆಲುಗು ಮೂಲ: http://aavakaaya.com/showArticle.aspx?a=li&articleId=455&pageNo=4

ಸ್ವಲ್ಪ ಜನ ಹಾಗೇ....

ಸ್ವಲ್ಪ ಜನ ಹಾಗೇ.....

ಗುಡಿಯ ಮೆಟ್ಟಲಿಗಳಂತೇ
ಹೊರಗೇ ಉಳಿದುಬಿಡುತ್ತಾರೇ
ಪಾದಗಳನ್ನ ಸಾದರವಾಗಿ ಸ್ವಾಗತಿಸುತ್ತಾ

ಎದೆಯ ಆಳದಲ್ಲಿ ಪುಷ್ಕರಣಿ ಇರುತ್ತದೇ
ಮೌನದಲ್ಲ್ ಅದರ
ಝುಳುಝುಳು

ಕೆಂಡಸಂಪಿಗೆ ಅರಳಿದಹಾಗೇ
ನಕ್ಷತ್ರ ಮಿಣುಕುವಹಾಗೇ
ಆಗಿಂದಾಗ್ಗೇ ಅವರ ಮಾತುಗಳು

ಅಕಾಶದ ಜೊತೆ ಸ್ನೇಹವಿದ್ದರೂ
ಆಲಯ ಶಿಖರಕ್ಕೇ ಅಹಂಕಾರವಿಲ್ಲ
ಇದ್ದರೇ ಪಾರಿವಾಳಗಳ ಜೊತೇ
ಅದಿ ಜೋಡೀ ಕಟ್ಟುವುದೇ !

ಆ ಸ್ವಲ್ಪ ಜನರೂ ಹಾಗೇ......!!


ತೆಲುಗು ಮೂಲ : http://aavakaaya.com/showArticle.aspx?a=li&articleId=455&pageNo=2