Friday, September 5, 2008

ಅನುವಾದ - ೪


ತೆಲುಗು ಮೂಲ : "ಸಗಟು ತೆಲುಗು ಜೀವಿ"
ತೆಲುಗು ಶೀರ್ಷಿಕೆ : ವೆಲುಗು ದಾಗದು (ಬೆಳಕು ಬಚ್ಚಿಟ್ಟುಕೊಳ್ಳದು)

ಕತ್ತಲು ಕವಿದರೂ ಬೆಳಕನ್ನು ಓದುವುದು
ತಾಯಿಯ ಗರ್ಭದಲ್ಲಿರುವಾಗದಿಂದೇ ನನಗೆ ಗೊತ್ತು
ಹಾದಿಯಲ್ಲಿ ಹಾದು ಹೋಗುತ್ತಿರುವನೊಬ್ಬ ಉಗುಳುತ್ತಾನೇ
ಮತ್ತೊಬ್ಬ ಬಯ್ಯುತ್ತಾನೇ, ಇನ್ಯಾರಾರೋ ತಳ್ಳಿಕೊಂಡು ಹೋಗುತ್ತಾರೇ
ಆಗ ಅವರೆಲ್ಲರೂ ಕತ್ತಲು ತಾಯಿನ ಮಕ್ಕಳಂತೇ ಕಾಣುತ್ತಾರೆ
ಆದರೂ
ಹಾದಿಯ ತುದಿಯಲ್ಲಿ
ಯಾರೋ ದಿವಿಟಿಗೆ ಹಿಡಿದಂತೇ ಅನಿಸುತ್ತದೆ
.......
ನಂಬಿಕೆ ಆಗಿರಬಹುದು !!


Tuesday, September 2, 2008

ಭಾರತದ ಇತಿಹಾಸ - 1

ಇತ್ತೀಚಿಗೆ ಆವಕಾಯ.ಕಾಮ್ ನಲ್ಲಿ ಮತ್ತು ಆರ್ಕುಟ್ ನಲ್ಲಿ ಭಾರತ ದೇಶದ ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವು ಚರ್ಚೆಗಳಲ್ಲಿ ನಾನೂ ಭಾಗವಹಿಸಿದ್ದೇ. ಆ ಚರ್ಚೆಗೆಳಲ್ಲಿ ಬಂದ ಕೆಲವು ಅಂಶಗಳನ್ನ ಆಯ್ದು ಇಲ್ಲಿ ಬರಿತಿದ್ದೀನಿ.

೧) ಮೊಗಲ್ ಮತ್ತು ಬ್ರಿಟೀಷರು ಸಾಮ್ರಾಜ್ಯವಾದಿಗಳಾದ ಕಾರಣ ಅವರು ಬರೆದಿಟ್ಟ ಚರಿತ್ರಗಳನ್ನ ಯಥಾವತ್ತಾಗಿ ಸ್ವೀಕರಿಸಬಾರದು. ಯಾಕೆಂದರೇ ಇಬ್ಬರೂ ದುರಾಕ್ರಮಣಕಾರಿಗಳಾಗಿ ಈ ದೇಶವನ್ನ ತಮ್ಮ ಹಿಡಿತಕ್ಕೆ ವಶಮಾಡಿಕೊಂಡು, ತಮ್ಮ ದೌರ್ಜನ್ಯವನ್ನ ಸಮರ್ಧಿಸಿಕೊಳ್ಳಲು ಚರಿತ್ರಯನ್ನ ವಕ್ರೀಕರಣ ಮಾಡಿದ್ದಾರಾದ್ದ ಕಾರಣ.

೨) ಮೊಗಲ್ ಚಕ್ರವರ್ತಿಗಳನ್ನ ಪರಮತಸಹನಶೀಲಿಗಳೆಂದು, ಭಿನ್ನ ಭಿನ್ನ ರಾಷ್ಟ್ರಗಳಾಗಿ ಒಡೆದು ಹೋಗಿದ್ದ ಭಾರತವನ್ನ ಏಕೀಕೃತ ಮಾಡಿದ ಧೀರರೆಂದು ಬ್ರಿಟೀಷರು ಬರೆದಿದ್ದಾರೆ. ಇದು ಸಹಜವೇ ಸರಿ. ಯಾಕೆಂದರೆ ಅವರು (ಬ್ರಿಟೀಷರು) ಸಹಿತ ಸಾಮ್ರಾಜ್ಯವಾದಿಗಳಾಗಿದ್ದರಿಂದ ತಮ್ಮ ಮುಂದೆ ಇದ್ದ ಸಾಮ್ರಾಜ್ಯವಾದಿಗಳನ್ನ ಹೊಗಿಳಿ, ತಾವೂನೂ ಅದೇ ವಿಧಾನವನ್ನ ಮುಂದು ವರಿಸಿ ಭಾರತದೇಶವನ್ನ ಕಾಪಾಡುತ್ತಿದ್ದೀವಿ ಎಂದು ತೋರಿಸುಕೊಂಡರು.

೩) ಪ್ರಮುಖ ಬರಹಗಾರರಾದ ಸೀತಾರಾಮ್ ಗೋಯೆಲ್ ತಮ್ಮ ಒಂದು ಪುಸ್ತಕದಲ್ಲಿ ಹೀಗೆ ಕೇಳಿದರು "ಮೊಗಲ್ ಚಕ್ರವರ್ತಿಗಳು ನಿಜವಾಗಿಯೂ ಪರಮತ ಸಹನ ವುಳ್ಳವರಾಗಿದ್ದರೇ ಢಿಲ್ಲಿ ಯಲ್ಲಿ ಎಂಟು ನೂರು ವರ್ಷಗಳ ಕಾಲ ಏಕೆ ಒಂದು ಹಿಂದೂ ದೇವಾಲಯವೂ ನಿರ್ಮಾಣವಾಗಲಿಲ್ಲ ? ಎಂಟನ್ ಶತಮಾನದಲ್ಲಿ ಸುಭದ್ರವಾಗಿ ಹೂಡಿಕೊಂಡ ಮುಸ್ಲಿಂ ಆಡಳಿತ ಕೊನೆಗೆ ಹದಿನೆಂಟನೇ ಶತಮಾನದಲ್ಲಿ ಕಳಚಿಬಿತ್ತು. ಅದಾದನಂತರ 1938 ರಲ್ಲಿ ಮಹಾತ್ಮಾ ಗಾಂಧೀ ಆರಂಭಿಸಿದ ಶ್ರೀ ಲಕ್ಷ್ಮೀ ನಾರಾಯಣ ಮಂದಿರವೇ ಡಿಲ್ಲೀಯಲ್ಲಿ ನಿರ್ಮಾಣವಾದ ಹಿಂದೂ ದೇವಾಲಯ. ಇದಕ್ಕೆ ಕಾರಣವೇನು ?

೪) 1911 ರಲ್ಲಿ ಬ್ರಿಟೀಷರಿಂದ ಪ್ರಚುರಿತ ವಾದ ಭಾರತದೇಶ ಚರಿತ್ರೆಯ ಪುಸ್ತಕದಲ್ಲಿ ತುಗ್ಲಕ್ ಮತ್ತು ಅವನ ನಂತರ ಬಂದ ಫಿರೋಜ್ ಖಾನರ ದುಷ್ಕೃತ್ಯಗಳನ್ನ ಬಹಳವಾಗಿ ವರ್ಣಿಸಿದ್ದಾರೇ. ಅದರಲ್ಲಿ ಒಂದು ತುಣುಕು "ತುಗ್ಲಕ್ ನ ನಂತರ ಅಧಿಕಾರಕ್ಕೆ ಬಂದ ಫಿರೋಜ್ ಖಾನ್ ಕಟ್ಟಾ ಇಸ್ಲಾಂ ವಿಶ್ವಾಸಿ. ತನ್ನ ಮಂದಿರಗಳಲ್ಲಿ ಎಲ್ಲಿಯೂ ಚಿತ್ರಗಳನ್ನ ಇಡಲು ಒಪ್ಪುತ್ತಿರಲಿಲ್ಲ. ಮುಸ್ಲಿಮೇತರರ ಮೇಲೆ ಜಿಜ್ಯಾ ಶುಲ್ಕವನ್ನು ವಿಧಿಸಿ ಕಡ್ಡಾಯವಾಗಿ ವಸೂಲಿ ಮಾಡುತಿದ್ದ. ಅವನ ಕಾಲದಲ್ಲಿ ರಾಜಧಾನಿಯಾದ ಢಿಲ್ಲಿನಲ್ಲಿ ದೇವಸ್ಥಾನವನ್ನು ಕಟ್ಟಲು ಪ್ರಯತ್ನಿಸಿದ ಒಬ್ಬ ಬ್ರಾಹ್ಮಣನನ್ನ ತನ್ನ ರಾಜಮಂದಿರದ ಎದುರುಗಡೆ ಜೀವಂತವಾಗಿ ಸುಟ್ಟು ಹಾಕಿಸಿದ". ಅವನ ನಂತರ ಅಧಿಕಾರ ಸಿಕ್ಕಿಸಿಕೊಂಡ ಅಲಾದೀನ್ ಖಿಲ್ಜೀ ಭಾರತಕ್ಕೆ ಬರುವ ಮುನ್ನ ಆಫ್ಘನಿಸ್ತಾನದಲ್ಲಿ ತನ್ನ ವ್ಯತಿರೇಕಿಗಳಾದ ಮತ್ತೊಬ್ಬ ಮುಸ್ಲಿಂ ರಾಜನ ಮೇಲೆ ದಾಳಿ ಮಾಡಿ ಅನೇಕ ದಿನಗಳ ಪರ್ಯಂತ ಪಟ್ಟಣದಲ್ಲಿದ್ದ ಎಲ್ಲಾ ಮಸೀದಿಗಳನ್ನ ಸುಟ್ಟು ಭಸ್ಮಮಾಡಿದ. ಅಷ್ಟೇಅಲ್ಲದೇ ಹಳೆಯ ರಾಜ ಪೂರ್ವೀಕರ ಗೋರೀಗಳನ್ನ ಅಗೆದು ಹಾಳು ಮಾಡಿದ.

೫) ಸೋಮನಾಥ ದೇವಾಲಯ ಮೇಲೆ ಘೌರೀ ನಡೆಸಿದ ಹಲ್ಲೆಯನ್ನು ಸಮರ್ಧನೆ ಮಾಡುವ ರೀತಿಯಲ್ಲಿ ಹಬೀಬ್ ಎಂಬ ಒಬ್ಬ ಮಾರ್ಕಿಸಿಸ್ಟ್ ಬರಹಗಾರ ಪ್ರಯತ್ನ ಮಾಡಿದ. "ಭಾರತದೇಶ ದಲ್ಲಿನ ದೇವಸ್ಥಾನಗಳು ಧನ, ಕನಕಗಳಿಂದ ತುಂಬಿ ತುಳುಕುತ್ತಿರುವುದನ್ನು ಕಂಡ ಇತರರಿಗೆ ಕಣ್ಣು ಕುಟುಕುವುದು ಸಹಜ. ಅದರಲ್ಲೂ ಘೌರೀ ನಂತಹ ಕಾಂಕ್ಷಾಶೀಲಿಗೆ ಈ ಕೊಳೆಯುವ ಧನ ಮತ್ತಿಷ್ಟು ಸಾಹಸ ಮಾಡಲಿಕ್ಕೆ ಕಾರಣವಾಯಿತು. ಹಾಗಾಗಿ ಸೋಮನಾಥ ದೇವಸ್ಥಾನದ ಮೇಲೆ ದಾಳಿ ನಡಿಸಲು ಘೌರಿಗೆ ಮತಕ್ಕಿಂತ ಧನವೆ ಪ್ರಧಾನ ಕಾರಣ"

(ಮುಂದು ವರಿಯುವುದು...)