Friday, August 8, 2008

ಜ್ಣಾನ ಯೋಗ - ಕರ್ಮ ಯೋಗ

ನಿನ್ನೆ ಒಬ್ಬ ತೆಲುಗು ಮಿತ್ರನ ಜೊತೆ ಮಾತನಾಡುತ್ತಿರುವಾಗ ಆತ ಒಂದು ಆಸಕ್ತಿಕರವಾದ ವಾದವನ್ನು ಮಾಡಿದ.

"ಭಾಗವತದಲ್ಲಿ ಪರಮಾತ್ಮ ಜ್ಣಾನಯೋಗದಿಂದಲೂ ಮುಕ್ತಿಯನ್ನ ಸಾಧಿಸಬಹುದು ಅಷ್ಟೇ ಅಲ್ಲದೇ ಕರ್ಮಯೋಗದಿಂದಲೂ ಮುಕ್ತಿಯನ್ನು ಸಾಧಿಸಬಹುದು ಅಂತ ಹೇಳಿದ್ದಾನೆ. ಜ್ಣಾನಯೋವವೆಂದರೇ ಅಹಮ್ ಬ್ರಹ್ಮಾಸ್ಮಿ ಅಂತ ತಿಳಿದುಕೊಳ್ಳುವ ಅದ್ವೈತ ವೆಂದು. ಕರ್ಮ ಯೋಗವೆಂದರೇ ಈಶ-ದಾಸ ಮನೋಭಾವ ತೋರಿಸುವ ದ್ವೈತವೆಂದು" ಆತ ವ್ಯಾಖ್ಯಾನ ಮಾಡಿದ.

ಮೇಲಿನ ಆತನ ಹೇಳಿಕೆಗೆ ನಾನು ಹೀಗ ಉತ್ತರಿಸಿದೆ:

"ಭಗವದ್ಸಂಬಧಾತ್ ಭಾಗವತಮ್ - ಯಾವ ಶಾಸ್ತ್ರವಾದರೆ ಒಬ್ಬ ನಶ್ವರ ಜೀವಿಯನ್ನ ಶಾಶ್ವತನಾದ ಪರಮಾತ್ಮನ ಜೊತೆಗೆ ಕೂಡಿಸುತ್ತದೋ ಅದೇ ಭಾಗವತ.


ಜೀವಿ-ಪರಮಾತ್ಮ ಜೊತೆ ಗೂಡುವುದೆಂದರೇ ಅವನು, ಇವನು ಒಂದೇ ಎನ್ನುವ ಅರ್ಥವಲ್ಲ. ಅಹಮ್ ಬ್ರಹ್ಮಾಸ್ಮಿ ಅಂತನೂ ಅರ್ಥವಲ್ಲ. ಮೋಕ್ಷದಲ್ಲೂ ಜೆವಿ ಪರಮಾತ್ಮನನ್ನು ದಾಸತ್ವೇನ ಹೊಂದುತಾನೆ. ಒಂದುವೇಳೆ ಇದು ಅದ್ವತವನ್ನೇ ಪ್ರತಿಪಾದಿಸುತ್ತದೇ ಅಂತ ಇಟ್ಟುಕೊಂಡರೇ ಅದೇ ಭಗವಂತ ಗೀತೆಯಲ್ಲಿ "ದ್ವಾ ವಿಮೌ ಪುರುಷೇ ಲೋಕೇ ಕ್ಷರಾಕ್ಷರಾಮೇವ ಚ" ಅಂತ ಯಾಕೇ ಹೇಳಿದ? ಲೋಕ ವೆಂದರೇ ಕೇವಲ ನಾವು ವಾಸಮಾಡುವ ಲೋಕೆವೆಂದೇನು ಅರ್ಥ ? ಅದೇ ಆದದ್ದಲ್ಲಿ ಭಾರತ, ಭಾಗವತದಲ್ಲಿ ಬರುವ ಎಲ್ಲಾ ಪಾತ್ರೆಗಳು ಬೇರೇ ಬೇರೇ ಲೋಕಗಳಿಂದ ಬಂದ ದೇವತಗಳ ಅವತಾರಗಳೇ ಹೊರತು ಸಾಧಾರಣ ಮನುಷ್ಯರು ಧರಿಸಿದ್ದವಲ್ಲ. ಅಂದರೇ, ಪರಮಾತ್ಮನ ವಚನಗಳು ದೇವೆತೆಗಳಿಗೂ ಅನ್ವಯವಾಗುತ್ತದಲ್ಲವೇ ! ಆದ್ದರಿಂದ ದೇವರು ಅಕ್ಷರ, ದೇವತೆಗಳು ಕ್ಷರವೆಂದೇ ವ್ಯಾಖ್ಯಾನ ಮಾಡಬೇಕು ! ಒಬ್ಬ ಶಾಶ್ವತ ಅಂದಮೇಲೇ ಅವನೇ ಯಜಮಾನ ಆಗ್ತಾನೆ. ಮಿಕ್ಕ ಅಶಾಶ್ವತವಾದವರು ಅವನಿಗೆ ದಾಸರೇ ಆಗಬೇಕು.

ಮೋಕ್ಷವೆಂದರೇ ಪರಮಾತ್ಮನಲ್ಲೇ ಸೇರುವುದಲ್ಲ. ಅವನ ಪ್ರತೀಕಗಳಂತೇ ಇರುವು ಮೂರು ಮುಕ್ತಸ್ಥಾನವಳನ್ನ ಪಡಿಯುವುದು. ಆ ಮುಕ್ತಸ್ಥಾನಗಳೇ ಶ್ವೇತದ್ವೀಪ, ಅನಂತಾಸನ, ವೈಕುಂಠ. ಇವು ಕೂಡಾ ಲೋಕಗಳೇ ಆಗಿದ್ದರಿಂದ ಪರಮಾತ್ಮ ಹೇಳಿದ "ದ್ವಾ ವಿಮೌ...." ಈ ಲೋಕಗಳಲ್ಲಿ ಕೂಡಾ ಅನ್ವಯವಾಗುತ್ತದೆ."


ನಾನು ಹೇಳಿದ್ದನ್ನೆಲ್ಲಾ ಕೇಳಿ ಆತ ತಳ್ಳಿಹಾಕಲೂ ಇಲ್ಲ, ಪ್ರತಿ ಉತ್ತರನ್ನೂ ಕೊಟ್ಟಿಲ್ಲ. ಈವತ್ತು ಒಂದು ಈಮೈಲ್ ಹೀಗೆ ಕಳುಸಿದ್ದಾನೆ "ನಾನು ಅದ್ವೈತವನ್ನು, ದ್ವೈತವನ್ನೂ ನಂಬುತ್ತೇನೇ. ಆದರೆ ಇದರಲ್ಲಿ ಯಾವುದು ದೊಡ್ಡದು ಎಂದು ವಾದಮಾಡುವದಲ್ಲ. ಮೋಕ್ಷವನ್ನು ಹೊಂದುವುದೇ ನನ್ನ ಗುರಿ. ಅದನ್ನ ತಲುಪುತ್ತೇನೇ"

ಮತದಲ್ಲಿ ಯಾವುದು ದೊಡ್ಡದೆಂದು ಅಳಿಯುವುದಾದರು ಹೇಗೇ? ಅನುಯಾಯಿಗಳ ಸಂಖ್ಯ ಇಂದೆನ ? ಗ್ರಂಥಗಳ ಸಂಖ್ಯದಿಂದನಾ ? ಅಥವಾ ವ್ಯತಿರೇಕಿಗಳ ಸಂಖ್ಯದಿಂದೆನಾ?


ಹೀಗೆಲ್ಲಾ ಅಳಿದರೇ ಅದು ಒಂದು ಒಪೀನಿಯನ್ ಪೋಲ್ ಆಗತ್ತೇ ಹೊರತು ಸಿದ್ಧಾಂತವಾಗಲ್ಲ. ಯಾವ ಮತವು ದೊಡ್ಡದೆಂದು ತಿಳಿಯುವುದಕ್ಕಿಂತ ಯಾವುದು ಸರಿಯಾದ್ದದ್ದು ಎಂದು ತಿಳಿಯುವುದು ಅತ್ಯಾವಶ್ಯಕ. ಹಾಗೆ ನಿಷ್ಪಕ್ಷಪಾತವಾಗಿ ನೋಡಿದಾಗ "ಮತದಲ್ಲಿ ಒಳ್ಳೆಯ ಮತ ಮಧ್ವ ಮತ" ಎಂದು ನನಗೆ ಅನ್ನಿಸುತ್ತಿದೆ.

ನಂಬಿ ಕೆಟ್ಟವರಿಲ್ಲವೋ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ

ಅಲ್ವಾ ?



No comments: